ಕಡಿಮೆ ಪದಾಥ೯ಗಳನ್ನು ಉಪಯೋಗಿಸಿ ಸುಲಭ ಹಾಗು ಕಡಿಮೆ ಸಮಯದಲ್ಲಿ ಮಾಡಬಹುದಾಂತಹ ಮಟನ್ ಪೆಪ್ಪರ್ ಡ್ರೈ
ಮಟನ್ ಪೆಪ್ಪರ್ ಡ್ರೈ ಮಾಡುವುದಕ್ಕೆ ಬೇಕಾಗುಂತಹ ಪದಾಥ೯ಗಳು
3 ಚಮಚ ಕಾಳು ಮೆಣಸಿನ ಪುಡಿ
ಕೊತ್ತಂಬರಿಸೊಪ್ಪು ಒಂದು ಕಂತೆ
ಪುದಿನ ಸೊಪ್ಪು ಸ್ವಲ್ಪ
2 ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
2 ಚಮಚ ಮಟನ್ ಮಸಾಲ ಪುಡಿ
1/2 ಚಮಚ ಅರಿಶಿಣ ಪುಡಿ
3 ಚಮಚ ಅಡುಗೆ ಎಣ್ಣೆ

ಮಟನ್ ಪೆಪ್ಪರ್ ಡ್ರೈ ಮಾಡುವ ವಿಧಾನ :
ಕುಕ್ಕರ್ ಪಾನ್ ನಲ್ಲಿ 3 ಚಮಚ ಅಡುಗೆ ಎಣ್ಣೆ ಹಾಕಿ 1/2 ಕೆಜಿಯಷ್ಟು ಕುರಿ ಮಾಂಸವನ್ನು ಹಾಕಿ ಹಾಕಬೇಕು. ಮಾಂಸ ಸ್ವಲ್ಪ ಪ್ರೈ ಆದ ನಂತರ 3 ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಫು, ಪುದಿನ ಸೊಪ್ಪು, 2 ಚಮಚ ಮಟನ್ ಮಸಾಲ ಪುಡಿ, ಅಧ೯ ಚಮಚ ಅರಿಶಿಣ ಪುಡಿ, 3 ಚಮಚ ಕಾಳು ಮೆಣಸಿನ ಪುಡಿ, ಇವೆಲ್ಲವನ್ನೂ ಚೆನ್ನಾಗಿ ಕಲೆಸಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 10 ನಿಮಿಷ ಬೇಯಿಸಬೇಕು.ಬೆಂದ ನಂತರ ಒಂದು ಲೋಟ ನೀರನ್ನು ಸೇರಿಸಿ ಪಾನ್ ಮುಚ್ಚಳವನ್ನು ಮುಚ್ಚಿ ಮೂರು ಬಾರಿ ಕೂಗಿಸಬೇಕು. ನಂತರ ಸ್ವಲ್ಪ ಕರಿಬೇವಿನ ಸೊಪ್ಪು ನಿಂಬೆಹಣ್ಣಿನ ರಸವನ್ನು ಸೇರಿಸಿ. ಹೆಚ್ಚಿನ ಹುರಿಯನ್ನು ಇಟ್ಟು ೩ ರಿಂದ ೪ ನಿಮಿಷ ಬೇಯಿಸಬೇಕು.ಅನ್ನ ಸಾಂಬರ್ ರಸಂ ಜೊತೆಗೆ ಮಟನ್ ಪೆಪ್ಪರ್ ಡ್ರೈ ಸವಿಯಲು ಚೆನ್ನಾಗಿರುತ್ತದೆ.

error: Content is protected !!