ಭಾರತ ದೇಶದ ಎಲ್ಲಾ ಯುವಕ ಯುವತಿಯರಿಗೂ ಒಮ್ಮೆ ಗಣರಾಜ್ಯೋತ್ಸವದ ದೆಹಲಿಯ ಪೆರೇಡ್‌ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಎಂತವರಿಗೂ ಪೆರೇಡ್‌ನಲ್ಲಿ ನಮ್ಮ ದೇಶದ ಶಕ್ತಿಯನ್ನು ನೋಡಿದಾಗ ಮೈ ರೋಮಾಂಚನವಾಗುತ್ತದೆ, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಿಶಕ್ತಿ ಎನ್ನುವ ಧ್ಯೇಯ ವಾಕ್ಯದಲ್ಲಿ ದೇಶದ 1500 ಮಹಿಳಾ ಕಲಾವಿದರು ಪೆರೇಡ್‌ನಲ್ಲಿ ಭಾಗವಹಿಸಿದರು. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ವೀಕ್ಷಿಸಿದರು. ಅಂತಹ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್‌ಗೆ ಲಭ್ಯವಾಯಿತು.

ಸಾಗರದ ಯೂತ್ ಫೋರ್ಸ್ ಅಸೋಸಿಯೇಷನ್ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಲ್ಲದೇ ನಮ್ಮ ನೆಲದ ಜಾನಪದ ಕಲೆಯಾದ ಗೀಜಿಪದ, ಕೋಲಾಟ, ಕಂಸಾಳೆ ಮುಂತಾದ ಕಲೆಗಳನ್ನು ಪ್ರದರ್ಶನ ಮಾಡುತ್ತಾ ದೇಶದ ಗಮನ ಸೆಳೆದಿದೆ.ಜನವರಿ 26 ರ ಗಣರಾಜ್ಯೋತ್ಸವದಲ್ಲಿ ಸಾಗತ್ ಯೂತ್ ಫೋಸ್ ಅಸೋಸಿಯೇಷನ್‌ನ 31 ವಿದ್ಯಾರ್ಥಿನಿಯರು ದೆಹಲಿಯ ಪೆರೇಡ್‌ನ ಪಥ ಸಂಚಲನದಲ್ಲಿ ಬೃಹತ್ ಚರ್ಮ ವಾದ್ಯಗಳಲ್ಲಿ ಒಂದಾದ ಡೊಳ್ಳು ಕುಣಿತವನ್ನು ಪ್ರದರ್ಶಿಸಿ ದೇಶೀಯ ಕಲಾತ್ಮಕ ಕಲೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ನಾರಿಶಕ್ತಿ ಧ್ಯೇಯ ವಾಕ್ಯದ ಪೆರೇಡ್‌ಗೆ ಕರ್ನಾಟಕದ ಕಲೆಯ ಮೂಲಕ ಕಳೆ ತಂದುಕೊಟ್ಟರು.

ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್‌ನ ಮುಖ್ಯಸ್ಥರಾದ ಪುಷ್ಪ, ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಡೊಳ್ಳು ಕಲೆಯ ತಾಲೀಮನ್ನು ದಿನವೂ ಅಭ್ಯಾಸ ಮಾಡಿಸಿ ಯಶಸ್ವಿ ಕಲಾವಿದರನ್ನಾಗಿ ಮೂಡಿಸಿದ್ದಾರೆ. ರಾಜ್ಯದ ಕೀರ್ತಿಯನ್ನು ಈ ಕಲಾವಿದರು ದೆಹಲಿಗೆ ಕೊಂಡ್ಯೊದಿದ್ದಾರೆ.

ಪುಷ್ಪ, ಮುಖ್ಯಸ್ಥರು, ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್ ಮಾತನಾಡಿ ಈ ವರ್ಷದ ನವದೆಹಲಿಯ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನಮ್ಮ ಸಂಸ್ಥೆಯ 31 ಜನ ವಿದ್ಯಾರ್ಥಿನಿಯರು ಡೊಳ್ಳು ಕಲೆಯನ್ನು ಪ್ರದರ್ಶಿಸಿ ದೇಶದ ಗಮನ ಸೆಳೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಅಪರೂಪದ ಅವಕಾಶ ನಮ್ಮದಾಗಿದೆ, ನಾರಿಶಕ್ತಿ ಧ್ಯೇಯ ವಾಕ್ಯದಲ್ಲಿ ನಮಗೆ ಸಿಕ್ಕ ಅವಕಾಶಕ್ಕೆ ಆಬಾರಿಯಾಗಿದ್ದೇವೆ. ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು.

ನರೇಂದ್ರ ಕುಲಗಟ್ಟೆ, ಸಂತಸ ಹಂಚಿಕೊಂಡು
ಕೇಂದ್ರ ಸರ್ಕಾರ ಈ ಬಾರಿ ನಾರಿಶಕ್ತಿಯನ್ನುವ ಧ್ಯೇಯ ವಾಕ್ಯದಲ್ಲಿ ಜಿಲ್ಲೆಯ 31 ವಿದ್ಯಾರ್ಥಿನಿಯರು ಡೊಳ್ಳು ಕಲೆಯನ್ನು ನವದೆಹಲಿಯ ಪೆರೇಡ್‌ನಲ್ಲಿ ಪ್ರದರ್ಶಿಸಿದ್ದಾರೆ. ದೇಶದ ನಾರಿಯರ ಕೌಶಲ್ಯ ಶಕ್ತಿಯನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ಅಭೂತಪೂರ್ವವಾದ ಅವಕಾಶವನ್ನು ನೀಡಿದ್ದು, ನಾನು ಕೂಡ ಇದರಲ್ಲಿ ಸಂಯೋಜಕನಾಗಿ ಪಾಲ್ಗೊಂಡಿದ್ದೆ ಎಂಬುದು ಹೆಮ್ಮೆ ತಂದಿದೆ.

ಭಾರತಿ, ಶ್ರೀಮತಿ ಇಂದಿರಾಗಾoಧಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ, ಡೊಳ್ಳು ಕಲಾವಿದೆ
ಸಾಗರದ ಇಂದಿರಾಗಾAಧಿ ಕಾಲೇಜಿನ ವಿದ್ಯಾರ್ಥಿನಿಯಾದ ನನಗೆ ನಮ್ಮ ತಂಡದ ಮೂಲಕ ಡೊಳ್ಳು ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ಹೆಮ್ಮೆ ತಂದಿದೆ.

error: Content is protected !!