ಶಿವಮೊಗ್ಗ, ಮೇ ೧೯: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಾಡಿನ ಜನತೆಯ ಬದುಕಿಗೆ ಬೆಳಕಾಗಿವೆ. ಮಹಿಳೆಯರು ಮತ್ತು ಬಡ, ಹಿಂದುಳಿದ ಜನತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವಲ್ಲಿ ಈ ಯೋಜನೆಗಳು ಯಶಸ್ವಿಯಾಗಿವೆ.
ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ಬಂದು ಮೇ ೨೦ ಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆ ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಮೂಲಕ ಪ್ರಗತಿಯತ್ತ ಜಿಲ್ಲೆ, ರಾಜ್ಯ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದು, ಈ ಹೆಜ್ಜೆ ಗುರುತುಗಳ ಮೇಲೆ ಬೆಳಕು ಚೆಲ್ಲುವ ಒಂದು ನುಡಿ ನೋಟ ಇದಾಗಿದೆ.
ರಾಜ್ಯದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಮತ್ತು ಮಹಿಳೆಯರನ್ನು ಸ್ವಾವಲಂಬಿಗೊಳಿಸಿ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿರುವ ‘ಗೃಹಲಕ್ಷಿö್ಮ’, ಹಸಿವು ಮುಕ್ತಗೊಳಿಸಿ, ನೆಮ್ಮದಿಯ ಬದುಕಿಗೆ ದಾರಿಮಾಡಿಕೊಟ್ಟಿರುವ ‘ಅನ್ನಭಾಗ್ಯ’, ದುಬಾರಿ ಯುಗದಲ್ಲಿ ಜನಸಾಮಾನ್ಯರ ಕೈಹಿಡಿದು ನಿಟ್ಟಿಸಿರುವ ಬಿಡುವಂತೆ ಮಾಡಿರುವ ‘ಗೃಹಜ್ಯೋತಿ’, ಮಹಿಳೆಯರು ಧೈರ್ಯವಾಗಿ, ನಿರಾತಂಕವಾಗಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶವಿತ್ತಿರುವ ಮಹಿಳೆಯರ ನಿಜವಾದ ಬಲ ‘ಶಕ್ತಿ’ ಯೋಜನೆ ಹಾಗೂ ಯುವಕರ ಪಾಲಿನ ಆಶಾಕಿರಣವಾಗಿರುವ ‘ಯುವ ನಿಧಿ’ ರಾಜ್ಯದ ಪ್ರಗತಿಯಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವುದಕ್ಕೆ ಫಲಾನುಭವಿಗಳ ಅನುಭವವೇ ಸಾಕ್ಷಿಯಾಗಿದೆ. ರಾಜ್ಯಾದ್ಯಂತ ಪ್ರತಿ ತಿಂಗಳು ಕೋಟ್ಯಾಂತರ ಫಲಾನುಭವಿಗಳು ಈ ಯೋಜನೆಯ ಫಲ ಪಡೆದು ಆತ್ಮ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಹಸಿವಿನ ಚಿಂತೆ ದೂರ ಮಾಡಿದ ‘ಅನ್ನಭಾಗ್ಯ’
ಬಡತನದ ಬೇಗೆಯಲ್ಲಿದ್ದ ನಮಗೆ ಅನ್ನಭಾಗ್ಯ ನಿಜಕ್ಕೂ ಅನ್ನದೇವರಾಗಿದೆ. ನನ್ನ ಗಂಡ ಅನಾರೋಗ್ಯದಿಂದಾಗಿ ಬಹಳ ಹಿಂದೆಯೇ ತೀರಿ ಹೋಗಿದ್ದು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ಚಿಕ್ಕ ಚಿಕ್ಕ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಇದೀಗ ಮಕ್ಕಳು ಡೊಡ್ಡವರಾಗುತ್ತಿದ್ದಾರೆ. ಒಬ್ಬ ಮಗಳು ಓದುತ್ತಿದ್ದಾಳೆ. ಮೊದಲೆಲ್ಲ ಕುಟುಂಬ ನಿರ್ವಹಣೆ ಬಗ್ಗೆ ತುಂಬಾ ಚಿಂತೆಯಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಯಾದಾಗಿನಿಂದ ಹಸಿವಿನ ಚಿಂತೆ ದೂರವಾಗಿ ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ. ಇದರಿಂದ ನನ್ನ ಆರೋಗ್ಯ ಸ್ಥಿತಿ ಹಾಗೂ ಮನೆಯ ಪರಿಸ್ಥಿತಿ ಕೂಡ ಸುಧಾರಣೆಯಾಗಿದೆ. ಅನ್ನಭಾಗ್ಯ ನಿಜಕ್ಕೂ ನಮ್ಮಂತವರ ಮನೆಗಳ ಭಾಗ್ಯವಾಗಿದೆ. ಅದಕ್ಕೆ ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ

– ಗುತ್ಯಮ್ಮ, ಕೊಮ್ಮನಾಳು, ಶಿವಮೊಗ್ಗ ತಾಲ್ಲೂಕು

ನೆಮ್ಮದಿ ತಂದ ಅನ್ನಭಾಗ್ಯ
ನನ್ನ ಕುಟುಂಬದಲ್ಲಿ ಒಟ್ಟು ೫ ಜನ ಸದಸ್ಯರಿದ್ದು, ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಕ್ಕಿ ದೊರೆಯುತ್ತಿದೆ. ಪ್ರತಿ ತಿಂಗಳು ಪಡಿತರ ಕುರಿತಾದ ಚಿಂತೆ ಇಲ್ಲದೇ, ಸಾಕಷ್ಟು ಅಕ್ಕಿ ಸಿಗುತ್ತಿದೆ. ಪಡಿತರಕ್ಕೆ ಖರ್ಚಾಗುತ್ತಿದ್ದ ಹಣ ಉಳಿತಾಯವಾಗುತ್ತಿರುವುದರಿಂದ ನನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಅನುಕೂಲವಾಗುತ್ತಿದೆ. ಮೊದಲು ಅಕ್ಕಿ ಮತ್ತು ಇತರೆ ಪಡಿತರದ ಕುರಿತು ಚಿಂತೆಗೀಡಾಗುವAತೆ ಆಗುತ್ತಿತ್ತು. ಅನ್ನಭಾಗ್ಯ ಯೋಜನೆಯಿಂದಾಗಿ ನೆಮ್ಮದಿ ದೊರಕಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಈಗ ಕುಟುಂಬದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಉಳಿತಾಯದ ಹಣದಲ್ಲಿ ಹಸು ಖರೀದಿಸಿ, ಹಾಲನ್ನು ಡೈರಿಗೆ ಹಾಕುವ ಮೂಲಕ ಆರ್ಥಿಕವಾಗಿ ಸಹಾಯವಾಗಿದೆ. ಇಂತಹ ಯೋಜನೆಗಳನ್ನು ನೀಡಿ ನಮ್ಮ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು.
-ಮಮತ, ಬಿಕ್ಕೋನಹಳ್ಳಿ, ಶಿವಮೊಗ್ಗ ತಾಲ್ಲೂಕು
ಕುಟುಂಬದ ಆಸರೆಯಾದ ಗೃಹಲಕ್ಷಿö್ಮ
ಕೂಲಿ ಕಾರ್ಮಿಕ ಕುಟುಂಬವಾದ ನಮಗೆ ನಿಜವಾದ ಆಸರೆ ಒದಗಿಸಿರುವುದು ಗೃಹಲಕ್ಷಿö್ಮ ಯೋಜನೆ. ನನ್ನ ಗಂಡ ಕೂಲಿ ಕೆಲಸ ಮಾಡಿ ಮನೆ ನಿರ್ವಹಿಸುತ್ತಾರೆ. ಇಬ್ಬರು ಮಕ್ಕಳಿದ್ದಾರೆ. ಹಾಗೂ ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಿರುವ ನನ್ನ ತಾಯಿ ನನ್ನ ಜೊತೆಯಲ್ಲಿಯೇ ಇದ್ದಾರೆ. ಮಕ್ಕಳ ಓದು, ಕುಟುಂಬದ ನಿರ್ವಹಣೆ, ಔಷಧಿ ಖರ್ಚು ಸೇರಿದಂತೆ ಮನೆ ನಿಭಾಯಿಸುವುದು ಅವರ ಒಬ್ಬರ ದುಡಿಮೆಯಿಂದ ಆಗುತ್ತಿರಲಿಲ್ಲ. ನಿತ್ಯ ಕಷ್ಟದಿಂದ ನರಳುವಂತಾಗಿತ್ತು. ಅದಕ್ಕಾಗಿ ನಾನೂ ಕೂಲಿ ಕೆಲಸಕ್ಕೆ ಹೋಗುತ್ತಿದೆ. ಇದೇ ಸಮಯದಲ್ಲಿ ಗೃಹಲಕ್ಷಿö್ಮ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ನೀಡಿರುವುದು ನಮ್ಮ ಕುಟುಂಬಕ್ಕೆ ಒಂದು ಶಕ್ತಿ ಬಂದAತಾಯಿತು. ನಾನು ಗೃಹಲಕ್ಷಿö್ಮ ಯೋಜನೆಯಡಿ ಪ್ರತಿ ತಿಂಗಳು ಬರುತ್ತಿರುವ ರೂ.೨೦೦೦ ಗಳನ್ನು ಉಳಿತಾಯ ಮಾಡಿ ತರಲಘಟ್ಟ ರಸ್ತೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಹಾಕಿಕೊಂಡಿದ್ದೇನೆ. ಜೊತೆಗೆ ಇದೇ ಅಂಗಡಿಯಲ್ಲಿ ಕಾಫಿ, ಟೀ ಸಹ ಮಾಡುತ್ತಿದ್ದೇನೆ. ವ್ಯಾಪಾರವೂ ಉತ್ತಮವಾಗಿ ಆಗುತ್ತಿದೆ. ಇದರಲ್ಲಿ ಬರುತ್ತಿರುವ ಆದಾಯದಿಂದ ನನ್ನ ತಾಯಿ ಔಷಧೋಪಚಾರಕ್ಕೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಮನೆ ನಿರ್ವಹಣೆಗೆ ಅನುಕೂಲವಾಗಿದೆ. ನನಗೂ ಸ್ವಂತ ಉದ್ಯೋಗ ಒದಗಿಬಂದು ನೆಮ್ಮದಿ ಲಭಿಸಿದೆ. ನನ್ನ ಗಂಡ ಸಹ ಅಂಗಡಿ ನಡೆಸಲು ಸಹಕರಿಸುತ್ತಾರೆ. ಹೀಗೆ ಗೃಹಲಕ್ಷಿö್ಮ ಯೋಜನೆ ನಮ್ಮ ಮನೆಯ ನಿಜವಾದ ಲಕ್ಷಿö್ಮಯಾಗಿದೆ. ಸರ್ಕಾರಕ್ಕೆ ಇಂತಹ ಯೋಜನೆಯನ್ನು ಮುಂದುವರೆಸಿಕೊAಡು ಹೋಗಬೇಕೆಂದು ಮನವಿ ಮಾಡುತ್ತೇನೆ. ಧನ್ಯವಾದಗಳು.

  • ಕಮಲೀಬಾಯಿ, ತರಲಘಟ್ಟ, ಶಿಕಾರಿಪುರ ತಾಲ್ಲೂಕು
    ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಗೃಹಲಕ್ಷಿö್ಮ
    ಸಾಕಷ್ಟು ಓದಿಕೊಂಡಿರುವ ನಾನು ಬಡವರಿಗೆ ಸಹಾಯ ಮಾಡುವ, ಸಮಾಜ ಸೇವೆ ಮಾಡುವ ಕನಸನ್ನು ಹೊತ್ತಿದ್ದೆ. ಆದರೆ ಅದು ಅಷ್ಟರ ಮಟ್ಟಿಗೆ ಸಾಕಾರ ಆಗಿರಲಿಲ್ಲ. ಕಾರಣ ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಇದೀಗ ಗೃಹಲಕ್ಷಿö್ಮ ಯೋಜನೆಯಿಂದ ಇದು ಸಾಕಾರಗೊಂಡಿದೆ. ನಾನು ಗೃಹಲಕ್ಷಿö್ಮ ಯೋಜನೆಯ ಹಣವನ್ನು ಬಡವರಿಗೆ ವಿನಿಯೋಗಿಸಬೇಕೆಂದು ನಿರ್ಧರಿಸಿದೆ. ನಂತರ ಯೋಜನೆಯ ಹಣದಲ್ಲಿ ಬಡ ಹೆಣ್ಣುಮಕ್ಕಳಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸಿ, ಸ್ಲಂ ನಲ್ಲಿ ವಾಸವಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚುತ್ತಾ ಬಂದೆ. ಹಾಗೂ ಬೀದಿ ಬದಿ ವ್ಯಾಪಾರ ಮಾಡುವ ವೃದ್ಧ ಮಹಿಳೆಯರಿಗೆ ಬಿಸಿಲು, ಮಳೆಗೆ ನೆರವಾಗಲು ಕೊಡೆಗಳನ್ನು ನೀಡಿದೆ ಮತ್ತು ಅಂಧರ ಶಾಲೆಯ ಮಕ್ಕಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನೀಡಿದ್ದು ಯೋಜನೆಯ ಹಣವನ್ನು ಸಮಾಜ ಸೇವೆಗೆಂದು ಮೀಸಲಿಟ್ಟಿದ್ದೇನೆ. ಈ ರೀತಿಯಾದ ಸಮಾಜ ಸೇವೆಯಿಂದಾಗಿ ನನ್ನಲ್ಲಿ ಒಂದು ರೀತಿಯ ಸಮಾಧಾನ ಮತ್ತು ಸಾರ್ಥಕ ಭಾವ ಮೂಡಿದೆ. ಇಂತಹ ಉತ್ತಮ ಯೋಜನೆ ನೀಡಿದ ಸರ್ಕಾರಕ್ಕೆ ನನ್ನ ಧನ್ಯವಾದಗಳು.
    -ಅನುಪಮಾ ಎಸ್, ವಿನೋಬನಗರ, ಶಿವಮೊಗ್ಗ ದೂರವಾಣಿ ಸಂಖ್ಯೆ:೯೯೦೧೫೯೪೪೪೧

ಮನೆಗಳನ್ನು ಬೆಳಗಿದ ಗೃಹಜ್ಯೋತಿ
ಗೃಹಜ್ಯೋತಿ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ನಮ್ಮಂತಹ ಕುಟುಂಬಗಳಿಗೆ ಬಹಳ ಅನುಕೂಲವಾಗಿದೆ. ಹಿಂದೆಲ್ಲ ತಿಂಗಳ ಕೊನೆ ಬಂದರೆ ವಿದ್ಯುತ್ ಬಿಲ್ ಸೇರಿದಂತೆ ಬಿಲ್‌ಗಳನ್ನು ಕಟ್ಟುವ ಯೋಚನೆಯೇ ಕಾಡುತ್ತಿತ್ತು. ಈಗ ಈ ಯೋಜನೆಯಿಂದ ತಿಂಗಳಿಗೆ ಕನಿಷ್ಟ ರೂ. ೫೦೦ ರಿಂದ ೧೦೦೦ ದವರೆಗೆ ಉಳಿತಾಯವಾಗುತ್ತಿದೆ. ಅದನ್ನು ಕುಟುಂಬ ನಿರ್ವಹಣೆಯ ಇತರೆ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಚಿತ ವಿದ್ಯುತ್ ನಮ್ಮಲ್ಲಿ ಒಂದು ವಿಶ್ವಾಸ ಮೂಡಿಸಿದೆ. ಮನೆ ಯಜಮಾನನಿಗೆ ಮನೆಯ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯೇ ಹೆಚ್ಚಾಗಿರುತ್ತದೆಇದೀಗ ರಾಜ್ಯ ಸರ್ಕಾರದ ಗೃಹಜ್ಯೋತಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಬಲೀಕರಣ ಸಾಧ್ಯವಾಗಿದೆ. ಗೃಹಜ್ಯೋತಿ ನಮ್ಮ ಮನೆಗಳನ್ನು ಬೆಳಗುತ್ತಿದೆ. ಈ ಯೋಜನೆಯನ್ನು ಜಾರಿಗೆ ತಂದು ನಮ್ಮಂತಹ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿರುವ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ.
– ಲೋಕಾನಾಯ್ಕ, ಸೋಮಿನಕೊಪ್ಪ, ಶಿವಮೊಗ್ಗ
ಕಷ್ಟಕ್ಕೆ ಸ್ಪಂದಿಸಿದ ಗೃಹಜ್ಯೋತಿ
ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಮುಂಚೆ ಕರೆಂಟ್ ಬಿಲ್ ದೊಡ್ಡ ಹೊರೆಯಾಗಿತ್ತು. ಒಂದು ವೇಳೆ ಕಟ್ಟದಿದ್ದರೆ ಕರೆಂಟ್ ಸರಬರಾಜನ್ನು ತೆಗೆಯುತ್ತಿದ್ದರು. ಇದರಿಂದ ಮನೆಯಲ್ಲಿ ತುಂಬಾ ಸಮಸ್ಯೆ ಆಗುತ್ತಿತ್ತು. ಆದರೆ ಈಗ ಸರ್ಕಾರ ಗೃಹ ಜ್ಯೋತಿ ಯೋಜನೆಯಿಂದ ಇವೆಲ್ಲ ಸಮಸ್ಯೆ ನಿವಾರಣೆಯಾಗಿದೆ. ನಿರಂತರವಾಗಿ ಜ್ಯೋತಿ ನಮ್ಮ ಮೆನಗಳನ್ನು ಬೆಳಗುತ್ತಿದೆ. ತಿಂಗಳ ಕೊನೆಯಾದರೆ ಕರೆಂಟ್ ಬಿಲ್ ಪಾವತಿಸಬೇಕೆಂಬ ಒತ್ತಡವಿಲ್ಲ. ಪ್ರತಿ ತಿಂಗಳು ಸರ್ಕಾರ ಕರೆಂಟ್ ಬಿಲ್ ಭರಿಸುವ ಮೂಲಕ ನಮ್ಮ ಕಷ್ಟಗಳಿಗೆ ಸ್ಪಂದಿಸಿದೆ. ವಿದ್ಯುತ್ ಬಿಲ್‌ನಿಂದ ಉಳಿತಾಯವಾದ ಹಣದಿಂದ ನನ್ನ ಕುಟುಂಬದ ಇತರೆ ಖರ್ಚನ್ನು ತೂಗಿಸಲು ಸಾಧ್ಯವಾಗುತ್ತಿದೆ. ಜೊತೆಗೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ.
– ಆರ್ ಬಾಲಕೃಷ್ಣ, ಹಾರೋಗೊಪ್ಪ, ಶಿಕಾರಿಪುರ
ಸ್ವತಂತ್ರ ಓಡಾಟಕ್ಕೆ ದಾರಿ ಮಾಡಿದೆ
ನಾನು ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದೇನೆ. ಮಾಚೇನಹಳ್ಳಿಯಿಂದ ಗೋಪಾಳಕ್ಕೆ ಪ್ರತಿ ದಿನ ಓಡಾಡಲು ಮೊದಲು ಕಾಲೇಜು ಪಾಸ್ ಮಾಡಿಸಿದ್ದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅತ್ಯಂತ ಅನುಕೂಲವಾಗಿದೆ. ಮೊದಲು ವಿದ್ಯಾರ್ಥಿ ಪಾಸ್ ಪಡೆದು ಕಾಲೇಜಿಗೆ ಹೋಗಿ ಬರುತ್ತಿದ್ದೆ. ಆ ಪಾಸ್‌ನಿಂದ ನಿಗದಿತ ಮಾರ್ಗದಲ್ಲಿ ಅಂದರೆ ಮನೆಯಿಂದ ಕಾಲೇಜಿಗೆ ಮಾತ್ರ ಸಂಚರಿಸಬೇಕಿತ್ತು. ಬೇರೆ ಮಾರ್ಗಕ್ಕೆ ಸಂಚರಿಸಲು ಹಣ ನೀಡಿ ಟಿಕೆಟ್ ಪಡೆಯಬೇಕಿತ್ತು. ಪ್ರಸ್ತುತ ಶಕ್ತಿ ಯೋಜನೆಯಿಂದ ಕಾಲೇಜು ಸೇರಿದಂತೆ ಬೇರೆ ಬೇರೆ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸುತ್ತೇನೆ. ಪ್ರಯಾಣಕ್ಕೆಂದು ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದ್ದು ಈ ಹಣವನ್ನು ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೇನೆ. ಹಾಗೂ ನಾನು ಮತ್ತು ನನ್ನ ಅಮ್ಮ, ತಂಗಿ ಎಲ್ಲರೂ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ ಹೋಗಬೇಕೆಂಬ ಹಂಬಲ ಹೊಂದಿದ್ದೆವು. ಆದರೆ ಅದು ನಮಗೆ ದುಬಾರಿಯಾದ ಕಾರಣ ಹೋಗಿರಲಿಲ್ಲ. ಆದರೆ ಶಕ್ತಿ ಯೋಜನೆ ಬಂದ ಮೇಲೆ ನಾವೆಲ್ಲ ಅನೇಕ ಪ್ರವಾಸಿ ಸ್ಥಳಗಳು ಮತ್ತು ದೇವಸ್ಥಾನಗಳಿಗೆ ಹೋಗಿ ಬಂದೆವು. ಇದರಿಂದ ಖುಷಿಯಾಗಿದೆ. ಈಗ ನಾವು ಮುಕ್ತವಾಗಿ ಓಡಾಡಲು ಸಾಧ್ಯವಾಗಿದೆ. ಶಕ್ತಿ ಯೋಜನೆಯಿಂದ ನಿಜವಾಗಿ ಮಹಿಳೆಯರಲ್ಲಿ ಬಲ ಬಂದAತಾಗಿದ್ದು, ಸ್ವತಂತ್ರವಾಗಿ ರಾಜ್ಯಾದ್ಯಂತ ಸಂಚಾರ ಮಾಡಿ ವಿವಿಧ ಸ್ಥಳಗಳನ್ನು ನೋಡಲು ಸಾಧ್ಯವಾಗಿಸಿದ ಸರ್ಕಾರಕ್ಕೆ ಧನ್ಯವಾದಗಳು.

– ದೀಕ್ಷಿತ, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಗೋಪಾಳ, ಶಿವಮೊಗ್ಗ

ಶಕ್ತಿ ಯೋಜನೆಯಿಂದ ಬಲ ಬಂದಿದೆ
ನಾನು ಮೆಗ್ಗಾನ್ ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ವಿಭಾಗದಲ್ಲಿ ದಿನಗೂಲಿ ನೌಕರಳಾಗಿದ್ದು ಪ್ರತಿದಿನ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಓಡಾಡುತ್ತೇನೆ. ಶಕ್ತಿ ಯೋಜನೆ ಬಂದಾಗಿನಿAದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಬಹಳ ಸಹಾಯವಾಗಿದೆ. ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ಕನಿಷ್ಟ ರೂ.೫೦ ರಿಂದ ೬೦ ಬಸ್ ಮತ್ತು ಇತರೆ ವಾಹನದ ಮೂಲಕ ಹೋಗಿ ಬರಲು ಖರ್ಚು ಆಗುತ್ತಿತ್ತು. ಬರುವ ಸಂಬಳದಲ್ಲೇ ಎಲ್ಲವನ್ನೂ ನಿಭಾಯಿಸಬೇಕಿತ್ತು. ಆದರೆ ಶಕ್ತಿ ಯೋಜನೆ ಬಂದ ಮೇಲೆ ಬಸ್ಸಿಗೆ ನೀಡುವ ಹಣ ಉಳಿತಾಯವಾಗುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಒಳ್ಳೆಯ ದಿನಗಳು ಬಂದಿವೆ ಎನ್ನಿಸುತ್ತಿದ್ದು, ನಿಜವಾಗಿ ಬಲ ಬಂದAತೆ ಆಗಿದೆ. ಶಕ್ತಿ ಯೋಜನೆಯಿಂದ ಹಣ ಕೂಡ ಉಳಿತಾಯವಾಗುತ್ತಿದ್ದು, ಉಳಿತಾಯದ ಹಣದಿಂದ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಶಕ್ತಿ ಯೋಜನೆಯ ಕಾರಣದಿಂದ ನಾನು ಮತ್ತು ನಮ್ಮ ಕುಟುಂಬದ ಮಹಿಳೆಯರು ಪ್ರವಾಸ ಸಹ ಮಾಡಲು ಸಾಧ್ಯವಾಯಿತು. ಶಕ್ತಿ ಯೋಜನೆಯಿಂದ ನಮ್ಮಂತಹ ಸಾವಿರಾರು ಮಹಿಳೆಯರಿಗೆ ಉಪಯೋಗವಾಗುತ್ತಿದ್ದು ಶಕ್ತಿ ಯೋಜನೆ ಹೀಗೇ ಮುಂದುವರೆಯಲಿ ಎಂದು ಮನವಿ ಮಾಡುತ್ತೇನೆ.

  • ಶೋಭಾ, ಭದ್ರಾವತಿ, ಶಿವಮೊಗ್ಗ ಜಿಲ್ಲೆ
    ಭರವಸೆ ಮೂಡಿಸಿದ ಯುವಜನತೆ
    ಡಿಪ್ಲೊಮಾ ಮುಗಿಸಿ ಕೆಲಸವಿಲ್ಲದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದ ನನಗೆ ಯುವನಿಧಿ ಯೋಜನೆ ವರದಾನದಂತೆ ಕಂಡಿದೆ. ಮನೆಯಲ್ಲಿ ಅಷ್ಟು ಅನುಕೂಲವಿಲ್ಲದ ಕಾರಣ ಓದು ಮುಗಿದ ನಂತರ ನನ್ನ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಾಗಿತ್ತು. ಕೆಲಸವಿಲ್ಲವೆಂಬ ಕೊರಗು ಒಂದು ಕಡೆ, ಅರ್ಜಿ ಸಲ್ಲಿಸಲು ಮನೆಯಲ್ಲಿ ಹಣ ಕೇಳಬೇಕು. ಕೆಲಸಕ್ಕಾಗಿ ಓಡಾಡಲು ಸಹ ಮನೆಯಲ್ಲಿ ಹಣ ಕೇಳುವಾಗ ಹಿಂಸೆಯಾಗುತ್ತಿತ್ತು. ಇದೀಗ ಯುವನಿಧಿ ಹಣ ಬರುತ್ತಿರುವುದರಿಂದ ನನ್ನ ಖರ್ಚನ್ನು ನಾನೇ ನಿರ್ವಹಿಸುತ್ತಿದ್ದೇನೆ. ಆದಷ್ಟು ಬೇಗ ಕೆಲಸ ಸಿಗುವ ಭರವಸೆಯೂ ಇದೆ. ಸರ್ಕಾರ ಆಗಾಗ ಉದ್ಯೋಗ ಮೇಳ ಆಯೋಜಿಸುತ್ತಿದ್ದು, ಅದರಲ್ಲೂ ಭಾಗವಹಿಸುತ್ತಿದ್ದೇನೆ. ಈ ಯೋಜನೆಯಿಂದಾಗಿ ಯುವಜನತೆ ಸೋಮಾರಿಗಳಾಗುತ್ತಾರೆ ಎಂಬ ಟೀಕೆ ಇದೆ. ಅದು ತಪ್ಪು. ಬದಲಾಗಿ ಆರ್ಥಿಕವಾಗಿ, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಯುವ ಜನರಿಗೆ ಆತ್ಮವಿಶ್ವಾಸ ತುಂಬುತ್ತಿರುವುದಲ್ಲದೇ ತಮ್ಮ ವಿದ್ಯಾರ್ಹತೆಗೆ ತಕ್ಕ ಕೌಶಲ್ಯವನ್ನು ಪಡೆದುಕೊಳ್ಳಲು ಸಹ ಸರ್ಕಾರ ನೆರವಾಗುತ್ತಿದೆ.
    -ಕಾರ್ತಿಕ್ ಎಸ್, ಡಿಪ್ಲೊಮಾ, ವಡ್ಡಿನಕೊಪ್ಪ, ವಿದ್ಯಾನಗರ, ಶಿವಮೊಗ್ಗ

*ಭಾಗ್ಯ ಎಂ ಟಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ

Leave a Reply

error: Content is protected !!