ಶಿವಮೊಗ್ಗ, ಏ.7 : ಮಹಾನಗರ ಪಾಲಿಕೆ ಶಿವಮೊಗ್ಗ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಭಾನುವಾರದಂದು ಮತದಾನದ ಕುರಿತು ಜಾಗೃತಿ ಮೂಡಿಸಲು ಗೋಪಾಳದಲ್ಲಿನ ನಿವಾಸಿಗಳೊಂದಿಗೆ ಮತದಾದ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.
ಮತದಾನದ ಹಬ್ಬದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಯುಗಾದಿ ಹಬ್ಬದ ಪ್ರಯುಕ್ತ ಅರಿಶಿನ-ಕುಂಕುಮ ಕೊಡುವುದರ ಮೂಲಕ ಸಂಪ್ರದಾಯವಾಗಿ ಆಚರಿಸಲಾಯಿತು.
ಇದೇ ವೇಳೆ ಕಲಾವಿದರ ತಂಡದಿಮದ ಮತದಾನ ಜಾಗೃತಿ ಗೀತೆ, ಕೋಲಾಟ, ಬೀದಿ ನಾಟಕ ದ ಮೂಲಕ ಮತದಾನ ಮಾಡುವಂತೆ ಮನವಿ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ಮಹಾನಗರ ಪಾಲಿಕೆ ಯ ಸ್ವೀಪ್ ತಂಡ, ನೇಸರ ಕಲಾವಿದರ ತಂಡ, ಸ್ಟೈಲ್ ಡಾನ್ಸ್ ತಂಡ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!