ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಕ್ರೆ ಗ್ರಾಮದ ಕೃಷಿಕರಾದ ಗಿರೀಶ್ ಹೆಗಡೆ ತಮ್ಮ ಅಡಿಕೆ ತೋಟದಲ್ಲಿ ಕಳೆದ 20 ವರುಷಗಳಿಂದ ಕಾಳು ಮೆಣಸು ಕೃಷಿಯನ್ನು ಮಾಡುತ್ತಿದ್ದು ಗಿಡವನ್ನು ಅಡಿಕೆ ಮರಕ್ಕೆ ಹಬ್ಬಿಸಿದ್ದು, ಜಿಲ್ಲೆಯ ಸಾಗರ ತಾಲ್ಲೂಕು ಮಳೆ ಹೆಚ್ಚು ಬೀಳುವ ಪ್ರದೇಶವಾಗಿದ್ದು, ಅವರ ತೋಟದಲ್ಲಿ ಕಾಳು ಮೆಣಸಿಗೆ ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗ ಬಂದು ಕಾಳು ಮೆಣಸಿನ ಇಳುವರಿಯೂ ಕೂಡ ಕಡಿಮೆಯಾಯಿತು.
ಇದರಿಂದ ಅವರ ಆದಾಯದ ಮೇಲೂ ಕೂಡ ಪರಿಣಾಮ ಬೀರಿತು ನಂತರ ಅವರು ಇದಕ್ಕೊಂದು ಪರಿಹಾರವನ್ನು ಹುಡುಕ ತೊಡಗಿದರು. ಅವರ ಈ ಪ್ರಯತ್ನ ಈಗ ಸಫಲವಾಗಿದೆ. ತುಂಬಾ ಸರಳವಾದ ವಿಧಾನದಲ್ಲಿ ಅವರ ತೋಟದಲ್ಲಿ ಕಾಳು ಮೆಣಸಿಗೆ ಬರುವ ಸೊರಗು ರೋಗಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
ವಿಧಾನ: ತನ್ನ ತೋಟದಲ್ಲಿರುವ ಇರುವ ಗೊಬ್ಬರ ಅಥವಾ ಪ್ಲಾಸ್ಟಿಕ್ ಚೀಲವನ್ನು ರಂದ್ರಕಾರವಾಗಿ ಕತ್ತರಿಸಿ ಅಡಿಕೆ ಮರದ ಬುಡಕ್ಕೆ ಸುತ್ತಲೂ ಹೊದಿಕೆಯ ರೂಪದಲ್ಲಿ ಹೊದಿಸಿ ಅಡಿಕೆಯ ಮರದ ಬುಡದಲ್ಲಿ ನೀರು ನಿಲ್ಲದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಇದರಿಂದ ನೇರವಾಗಿ ಅಡಿಕೆಯ ಮರದ ಬುಡಕ್ಕೆ ನೀರು ಬೀಳದೇ ಇರುವುದರಿಂದ ಕಾಳು ಮೆಣಸಿನಲ್ಲಿ ಸೊರಗು ರೋಗದ ಲಕ್ಷಣ ಕಂಡು ಬಂದಿಲ್ಲ. ಅವರ ತೋಟ ರೋಗಮುಕ್ತವಾಗಿದೆ ಈ ಸರಳ ವಿಧಾನದಿಂದ ಸೊರಗು ರೋಗಕ್ಕೆ ಪರಿಹಾರವನ್ನು ಕಂಡು ಕೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ.
ಗಿರೀಶ್ ಹೆಗಡೆ ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 94481 46432

ವರದಿ: ಜೆ.ಲೋಕೇಶ್
ಮೊಬೈಲ್ ನಂ: 9448216105/9686799371
ಮಿಂಚಂಚು: krishinirantarasmg@gmail.com

error: Content is protected !!